ಕರ್ನಾಟಕದ ಎಲ್ಲ ಬಂಧುಗಳಿಗೆ ನಮಸ್ಕಾರ ಪ್ರಸ್ತುತ ಈ ಲೇಖನದ ಮೂಲಕ ತಿಳಿಸಲಾಗಿರುವ ವಿಷಯವೇನೆಂದರೆ ರಾಜ್ಯ ಸರ್ಕಾರದ ಉದ್ಯೋಗಿನಿ ಯೋಜನೆಯ ಅಡಿಯಲ್ಲಿ ಮಹಿಳೆಯರಿಗೆ 3 ಲಕ್ಷಗಳವರೆಗೆ ಸಾಲವನ್ನು ನೀಡಲಾಗುತ್ತದೆ ಮತ್ತು ಅದರಲ್ಲಿ 1.50 ಲಕ್ಷ ಸಾಲವನ್ನು ಮನ್ನಾ ಮಾಡಲಾಗುತ್ತದೆ ಈ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸುವುದು ಎಂದು ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಲಾಗಿದೆ ಈ ಲೇಖನವನ್ನು ಕೊನೆಯವರೆಗೂ ಓದಿ… Udyogini Scheme
ಹೌದು ಬಂಧುಗಳೇ, ರಾಜ್ಯ ಸರ್ಕಾರವು ನಮ್ಮ ರಾಜ್ಯದ ಜನತೆಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ರಾಜ್ಯ ಸರ್ಕಾರವು ಜಾರಿಗೆ ತಂದಿರುವ ಹಲವಾರು ಯೋಜನೆಗಳ ಲಾಭವನ್ನು ಈಗಾಗಲೇ ರಾಜ್ಯದ ಜನರು ಪಡೆದುಕೊಂಡಿದ್ದಾರೆ. ಅದೇ ರೀತಿ ರಾಜ್ಯ ಸರ್ಕಾರವು ರಾಜ್ಯಸಭಾ ಚುನಾವಣೆಗೂ ಮುನ್ನ ಪಂಚ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿತ್ತು. ಪಂಚ ಗ್ಯಾರಂಟಿ ಯೋಜನೆಗಳೆಂದರೆ 5 ಗ್ಯಾರಂಟಿ ಯೋಜನೆಗಳು ಎಂದರ್ಥ ಅವುಗಳೆಂದರೆ ಗೃಹಲಕ್ಷ್ಮಿ ಯೋಜನೆ , ಅನ್ನಭಾಗ್ಯ ಯೋಜನೆ , ಶಕ್ತಿ ಯೋಜನೆ , ಯುವನಿಧಿ ಯೋಜನೆ ಮತ್ತು ಗೃಹಜೋತಿ ಯೋಜನೆ. ಈ ಐದು ಯೋಜನೆಗಳನ್ನು ರಾಜ್ಯದ ಕಾಂಗ್ರೆಸ್ ಸರ್ಕಾರವು ವಿಧಾನಸಭಾ ಚುನಾವಣೆಗೂ ಮುನ್ನ ಘೋಷಿಸಿತ್ತು.
ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದ ನಂತರ ಘೋಷಿಸಿದ ಎಲ್ಲಾ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದು. ಇದರಲ್ಲಿ ಪ್ರಮುಖವಾಗಿ ಎರಡು ಯೋಜನೆಗಳು ಮಹಿಳೆಯರಿಗೆ ಎಂದೆ ಜಾರಿಗೆ ತರಲಾಗಿದೆ. ಅವುಗಳು ಈ 5 ಯೋಜನೆಗಳಲ್ಲಿ ತುಂಬಾ ಜನಪ್ರಿಯವಾದ ಯೋಜನೆಗಳೆಂದು ಹೇಳಬಹುದು. ಅವುಗಳೆಂದರೆ ಗೃಹಲಕ್ಷ್ಮಿ ಯೋಜನೆ ಮತ್ತು ಶಕ್ತಿ ಯೋಜನೆ. ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಅರ್ಜಿ ಸಲ್ಲಿಸಿದ ರಾಜ್ಯದ ಮನೆ ಯಜಮಾನ ಖಾತೆಗೆ ಪ್ರತಿ ತಿಂಗಳು 2000 ಹಣವನ್ನು ಈ ಯೋಜನೆಯ ಅಡಿಯಲ್ಲಿ ಜಮಾ ಮಾಡಲಾಗುತ್ತದೆ. ಈಗಾಗಲೇ ಈ ಯೋಜನೆಯ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಪರಿಚಯ ಒಬ್ಬ ಮಹಿಳೆಗೂ 10 ಕಂತುಗಳು ಹಣ ಅಂದರೆ ಸರಿ ಸುಮಾರು 20 ಸಾವಿರ ಹಣವನ್ನು ಅರ್ಹ ಫಲಾನುಭವಿ ಮಹಿಳೆಯರ ಖಾತೆಗೆ ಜಮಾ ಮಾಡಲಾಗಿದೆ.
ಎರಡನೆಯದಾಗಿ ಶಕ್ತಿ ಯೋಜನೆ, ಈ ಶಕ್ತಿ ಯೋಜನೆ ಎಂದರೆ ಈ ಯೋಜನೆಯ ಅಡಿಯಲ್ಲಿ ರಾಜ್ಯದ ಯಾವ ಜಿಲ್ಲೆ ಅಥವಾ ತಾಲೂಕು ಅಥವಾ ಹಳ್ಳಿಯಲ್ಲಾದರೂ ನಮ್ಮ ರಾಜ್ಯದ ಮಹಿಳೆಯರು ತಮ್ಮ ಆಧಾರ್ ಕಾರ್ಡನ್ನು ತೋರಿಸಿ ಉಚಿತವಾಗಿ ಪ್ರಯಾಣಿಸಬಹುದು. ಈಗಾಗಲೇ ಈ ಯೋಜನೆಯ ಲಾಭವನ್ನು ರಾಜ್ಯದ ಎಲ್ಲಾ ಮಹಿಳೆಯರು ಪಡೆದುಕೊಂಡಿದ್ದಾರೆ. ಈ ಯೋಜನೆಯ ಲಾಭವನ್ನು ಪಡೆಯಲು ಯಾವುದೇ ರೀತಿ ಅರ್ಜಿ ಸಲ್ಲಿಸಬೇಕಾಗಿಲ್ಲ ಮತ್ತು ಯೋಜನೆಯ ಲಾಭವನ್ನು ಪಡೆಯೋದು ಯಾವುದೇ ರೀತಿ ವಯಸ್ಸಿನ ಅಗತ್ಯವಿಲ್ಲ.
ಅದೇ ರೀತಿ ಇದೀಗ ರಾಜ್ಯ ಸರ್ಕಾರವು ರಾಜ್ಯದ ಮಹಿಳೆಯರಿಗಾಗಿ ಉದ್ಯೋಗಿನಿ ಯೋಜನೆಯ ಎಂಬ ಒಂದು ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಗೆ ಅರ್ಜಿ ಸಲ್ಲಿಸಿ ರಾಜ್ಯದ ಮಹಿಳೆಯರು 3 ಲಕ್ಷ ರೂಪಾಯಿಗಳವರೆಗೆ ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ಪಡೆದುಕೊಳ್ಳಬಹುದು ಮತ್ತು 1.50 ಲಕ್ಷದವರೆಗೆ ಈ ಯೋಜನೆ ಅಡಿಯಲ್ಲಿ ಸಾಲವನ್ನು ಮನ್ನಾ ಮಾಡಲಾಗುತ್ತದೆ. ಈ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ನೀಡಿದ್ದೇವೆ ಆದ್ದರಿಂದ ಈ ಲೇಖನವನ್ನು ಕೊನೆಯವರೆಗೂ ಓದಿ ಅರ್ಧಂಬರ್ಧ ಓದಿದರೆ ನಿಮಗೆ ಈ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯುವುದಿಲ್ಲ.
ಬಂಧುಗಳೇ ನಾವು ಇದೇ ರೀತಿ ಕೇಂದ್ರ ಸರಕಾರದ ಯೋಜನೆಗಳ ಬಗ್ಗೆ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಬಗ್ಗೆ ದಿನನಿತ್ಯ ಅಧಿಕೃತ ಮಾಹಿತಿಯನ್ನು ನಮ್ಮ Karnatakaudyogamitra.com ಜಾಲತನದಲ್ಲಿ ಅಪ್ಲೋಡ್ ಮಾಡುತ್ತಿರುತ್ತೇವೆ. ಸರ್ಕಾರಿ ಯೋಜನೆಗಳ ಬಗ್ಗೆ ಅಷ್ಟೇ ಅಲ್ಲದೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದಲ್ಲಿ ಖಾಲಿ ಇರುವಂತಹ ಉದ್ಯೋಗಗಳ ಬಗ್ಗೆ ಕೂಡ ನಾವು ನಮ್ಮ ಜಾಲತಾಣದಲ್ಲಿ ಮಾಹಿತಿಯನ್ನು ನೀಡುತ್ತೇವೆ. ಅದರ ಜೊತೆಗೆ ಖಾಸಗಿ ಕಂಪನಿಗಳಲ್ಲಿ ಖಾಲಿ ಇರುವ ಉದ್ಯೋಗಗಳ ಬಗ್ಗೆಯೂ ಸಹ ನಾವು ಮಾಹಿತಿಯನ್ನು ಅಪ್ಲೋಡ್ ಮಾಡುತ್ತಿರುತ್ತೇವೆ.
ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ದ ಯೋಜನೆಗಳ ಬಗ್ಗೆ ಮತ್ತು ಸರ್ಕಾರಿ ಕೆಲಸ ಬಗ್ಗೆ ಎಲ್ಲರಿಗಿಂತ ಮುಂಚಿತವಾಗಿ ನೀವು ಮಾಹಿತಿಯನ್ನು ಪಡೆಯಲು ಬಯಸಿದರೆ ತಪ್ಪದೆ ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಗ್ರೂಪ್ ಅನ್ನು ಜಾಯಿನ್ ಆಗಿ. ಅಲ್ಲಿ ನಾವು ದಿನನಿತ್ಯ ಇದೇ ರೀತಿ ಅಧಿಕೃತ ಮಾಹಿತಿಗಳನ್ನು ಲೇಖನದ ಮೂಲಕ ಅಪ್ಲೋಡ್ ಮಾಡುತ್ತೇವೆ. ಅಲ್ಲಿ ನೀವು ಎಲ್ಲರಿಗಿಂತ ಮುಂಚಿತವಾಗಿ ನಮ್ಮ ಲೇಖನಗಳನ್ನು ಓದಬಹುದು…
ಉದ್ಯೋಗಿನಿ ಯೋಜನೆ ( Udyogini Scheme ) :
ಹೌದು ಬಂಧುಗಳೇ, ಇದು ನಮ್ಮ ರಾಜ್ಯ ಸರ್ಕಾರ ಮಹಿಳೆಯರಿಗಾಗಿ ಜಾರಿಗೆ ತಂದಿರುವಂತಹ ಒಂದು ಯೋಜನೆಯಾಗಿದೆ. ಬಡ ಮಹಿಳೆಯರು ಮತ್ತು ಸ್ವಯಂ ಉದ್ಯೋಗ ಮಾಡುತ್ತಿರುವ ಮಹಿಳೆಯರು ಅಥವಾ ಸ್ವಂತ ಉದ್ಯೋಗವನ್ನು ಪ್ರಾರಂಭಿಸಲು ಬಯಸುವಂತಹ ಮಹಿಳೆಯರಿಗಾಗಿ ಈ ಯೋಜನೆಯನ್ನು ರಾಜ್ಯ ಸರ್ಕಾರವು ಜಾರಿಗೆ ತಂದಿದೆ. ಈ ಯೋಜನೆಯ ಮೂಲಕ ಮಹಿಳೆಯರು ಸ್ವಾವಲಂಬಿಯಾಗಿ ಜೀವನವನ್ನು ನಡೆಸಲು ಬಯಸುವಂತಹ ಮತ್ತು ಹಿಂದುಳಿದ ವರ್ಗದವರಾದ ಮತ್ತು ಬಡ ಕುಟುಂಬದ ಮಹಿಳೆಯರು ತಮಗೆ ಇಷ್ಟವಿರುವ ಉದ್ಯೋಗವನ್ನು ಪ್ರಾರಂಭಿಸಲು ಈ ಯೋಜನೆ ಅಡಿ 3 ಲಕ್ಷ ರೂಪಾಯಿಗಳವರೆಗೆ ಸಾಲವನ್ನು ನೀಡಲಾಗುತ್ತದೆ. ಈ ಹಣವನ್ನು ಪಡೆದುಕೊಂಡು ತಮಗೆ ಇಷ್ಟವಿರುವ ಉದ್ಯೋಗವನ್ನು ಮಹಿಳೆಯರು ಪ್ರಾರಂಭಿಸಬಹುದು.
ಹೌದು ಬಂಧುಗಳೇ, ಈ ಉದ್ಯೋಗಿನಿ ಯೋಜನೆಯನ್ನು ಜಾರಿಗೆ ತರಲು ಮೂಲ ಉದ್ದೇಶವೇನೆಂದರೆ ಮಹಿಳೆಯರು ಸ್ವಾವಲಂಬಿಯಾಗಿ ಜೀವನವನ್ನು ನಡೆಸಲು ಈ ಯೋಜನೆ ತುಂಬಾ ಸಹಾಯವಾಗುತ್ತದೆ. ಈ ಯೋಜನೆ ಅಡಿಯಲ್ಲಿ ಸ್ವಂತ ಉದ್ಯೋಗವನ್ನು ಪ್ರಾರಂಭಿಸುವ ಮಹಿಳೆಯರು 3 ಲಕ್ಷ ರೂಪಾಯಿ ಸಾಲವನ್ನು ಯಾವುದೇ ರೀತಿ ಬಡ್ಡಿದರವಿಲ್ಲದೆ ಪಡೆದುಕೊಂಡು ತಮಗೆ ಇಷ್ಟವಿರುವ ಉದ್ಯೋಗವನ್ನು ಪ್ರಾರಂಭಿಸಬಹುದು.
ಉದ್ಯೋಗಿನಿ ಯೋಜನೆಯ ಪ್ರಯೋಜನಗಳೇನು…?
ಬಂಧುಗಳೇ ಈ ಉದ್ಯೋಗಿನಿ ಯೋಜನೆಗೆ ಅರ್ಜಿ ಸಲ್ಲಿಸುವ ಸಾಮಾನ್ಯ ವರ್ಗದ ಮಹಿಳೆಯರು ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಹಿಳೆಯರು ಹಾಗೂ ಹಿಂದುಳಿದ ವರ್ಗದ ಮಹಿಳೆಯರು ಮತ್ತು ಇತರ ಮಹಿಳೆಯರು ಈ ಉದ್ಯೋಗಿನಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು. ಈ ಯೋಜನೆಗೆ ಅರ್ಜಿ ಈ ಯೋಜನೆ ಅಡಿಯಲ್ಲಿ 3 ಲಕ್ಷ ರೂಪಾಯಿಗಳವರೆಗೆ ಯಾವುದೇ ಬಡ್ಡಿದರವಿಲ್ಲದೆ ಸಾಲವನ್ನು ಪಡೆದುಕೊಳ್ಳಬಹುದು. ಹೀಗಾಗಿ ಈ ಯೋಜನೆಯು ಮಹಿಳೆಯರಿಗೆ ಒಂದು ವಿಶೇಷವಾದ ಯೋಜನೆಯಾಗಿದೆ.
ಶೇಕಡ 30% ರಷ್ಟು ಸಾಲ ಮನ್ನಾ : ಹೌದು ಬಂಧುಗಳೇ ಈ ಉದ್ಯೋಗಿನಿ ಯೋಜನೆಯ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಹಿಳೆಯರಿಗೆ ಯಾವುದೇ ರೀತಿ ಬಡ್ಡಿದರ ಇಲ್ಲದೆ 3 ಲಕ್ಷ ರುಪಾಯಿಗಳವರೆಗೆ ಸಾಲವನ್ನು ನೀಡಲಾಗುತ್ತದೆ. ನೀಡಿದ ಸಾಲದಲ್ಲಿ ಶೇಕಡ 30ರಷ್ಟು ಅಂದರೆ ಸುಮಾರು 90 ಸಾವಿರ ರೂಪಾಯಿಗಳವರೆಗೆ ಸಾಲವನ್ನು ಮನ್ನಾ ಮಾಡಲಾಗುತ್ತದೆ ಅಥವಾ ಸಬ್ಸಿಡಿ ಹಣ ನೀಡಲಾಗುತ್ತದೆ.
ಶೇಕಡ 50% ಎಷ್ಟು ಸಾಲ ಮನ್ನಾ : ಹೌದು ಬಂಧುಗಳೇ ! ಈ ಉದ್ಯೋಗಿನಿ ಯೋಜನೆಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಹಿಳೆಯರು ಅರ್ಜಿಯನ್ನು ಸಲ್ಲಿಸಬಹುದು ಮತ್ತು ಯಾವುದೇ ರೀತಿ ಬಡ್ಡಿದರವಿಲ್ಲದೆ ಈ ಯೋಜನೆಯ ಅಡಿಯಲ್ಲಿ 3 ಲಕ್ಷ ರೂಪಾಯಿಗಳವರೆಗೆ ಸಾಲವನ್ನು ಪಡೆದುಕೊಳ್ಳಬಹುದು. ಸಾಲವನ್ನು ಪಡೆದಿರುವ ಮಹಿಳೆಯರ ಶೇಕಡ 50ರಷ್ಟು ಅಂದರೆ ಸರಿಸುಮಾರು 1.50 ಲಕ್ಷ ರೂಪಾಯಿಗಳವರೆಗೆ ಸಾಲವನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಬಂಗಾರಕ್ಕೆ ಸೇರಿದ ಮಹಿಳೆಯರ ಸಾಲವನ್ನು ಮನ್ನಾ ಮಾಡಲಾಗುತ್ತದೆ.
ಹೌದು ಬಂಧುಗಳೇ, ಈ ಉದ್ಯೋಗಿನಿ ಯೋಜನೆಗೆ ಮಹಿಳೆಯರು ಮಾತ್ರ ಅರ್ಜಿಯನ್ನು ಸಲ್ಲಿಸಬೇಕು. ಹೀಗಾಗಿ ಈ ಯೋಜನೆಗೆ ಮಹಿಳೆಯರು ಅರ್ಜಿ ಸಲ್ಲಿಸಲು ಸ್ವಂತ ಉದ್ಯೋಗಕ್ಕಾಗಿ ಅಥವಾ ಘಟಕದ ವೆಚ್ಚ ಸರಿಸುಮಾರು 1 ಲಕ್ಷದವರೆಗೆ ಸಾಲ ಸಿಗುತ್ತದೆ. ಗರಿಷ್ಠ ಮೊತ್ತ ಅಂದರೆ ಈ ಯೋಜನೆ ಅಡಿಯಲ್ಲಿ ಸಿಗುವ ಗರಿಷ್ಠ ಮೊತ್ತವೆಂದರೆ ಸುಮಾರು 3 ಲಕ್ಷ ರುಪಾಯಿಗಳವರೆಗೆ ಸಿಗುತ್ತದೆ.
ಉದ್ಯೋಗಿನಿ ಯೋಜನೆಗೆ ಬೇಕಾಗುವ ಪ್ರಮುಖ ದಾಖಲೆಗಳೇನು…?
- ಆಧಾರ್ ಕಾರ್ಡ್
- ರೇಷನ್ ಕಾರ್ಡ್
- ಬ್ಯಾಂಕ್ ಪಾಸ್ ಬುಕ್
- ಜಾತಿ ಪ್ರಮಾಣ ಪತ್ರ
- ಆದಾಯ ಪ್ರಮಾಣ ಪತ್ರ
- ವಿಶೇಷ ಪ್ರಮಾಣ ಪತ್ರ
- ಶಾಲಾ ವರ್ಗಾವಣೆ ಪ್ರಮಾಣ ಪತ್ರ
- ಇತರ ದಾಖಲೆಗಳು
ಸ್ನೇಹಿತರೆ ನೀವು ಈ ಉದ್ಯೋಗಿನಿ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸಿದರೆ ಮೇಲೆ ನೀಡುವ ಪ್ರಮುಖ ದಾಖಲೆಗಳನ್ನು ತೆಗೆದುಕೊಂಡು ನಿಮ್ಮ ಹತ್ತಿರದ ಸೈಬರ್ ಸೆಂಟರ್ ಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು ಅಥವಾ ಸೇವಾ ಕೇಂದ್ರಗಳಲ್ಲಿಯೂ ಸಹ ನೀವು ನಿಮ್ಮ ದಾಖಲೆಗಳನ್ನು ನೀಡಿ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.
ಈ ಯೋಜನೆಗೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳನ್ನು…?
ಮಹಿಳೆಯರ ಮಾತ್ರ ಅರ್ಜಿ ಸಲ್ಲಿಸಬೇಕು : ಹೌದು ಬಂಧುಗಳೇ, ಈ ಉದ್ಯೋಗಿನಿ ಯೋಜನೆಗೆ ಮಹಿಳೆಯರ ಮಾತ್ರ ಅರ್ಜಿ ಸಲ್ಲಿಸಬೇಕು. ಮಹಿಳೆಯರು ಬಿಟ್ಟು ಪುರುಷರು ಈ ಯೋಜನೆಗೆ ಅರ್ಜಿ ಸಲ್ಲಿಸುವಂತಿಲ್ಲ. ಈ ಯೋಜನೆಗೆ ಅರ್ಜಿ ಸಲ್ಲಿಸುವ ಮಹಿಳೆಗೆ 3 ಲಕ್ಷಗಳವರೆಗೆ ಬಡ್ಡಿ ರಹಿತ ಸಾಲವನ್ನು ನೀಡಲಾಗುತ್ತದೆ.
ಅರ್ಜಿದಾರರ ವಾರ್ಷಿಕ ಆದಾಯ : ಈ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವ ಮಹಿಳೆಯರ ಅಥವಾ ಆ ಮಹಿಳೆಯ ಕುಟುಂಬದ ವಾರ್ಷಿಕ ಆದಾಯವು 1,56,000 ದ ಒಳಗಿರಬೇಕು .
ವಯೋಮಿತಿ : ಅರ್ಜಿ ಸಲ್ಲಿಸಲು ಬಯಸುವ ಮಹಿಳೆಯ ವಯಸ್ಸು ಕನಿಷ್ಠ 18 ಆಗಿರಬೇಕು ಗರಿಷ್ಠ ವಯಸ್ಸು 55ರ ಒಳಗಿರಬೇಕು. ಆಗಿದ್ದಾಗ ಮಾತ್ರ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.
ಸ್ವಂತ ಉದ್ಯೋಗ ಸಾಲ : ಬಂಧುಗಳೇ ಈ ಉದ್ಯೋಗಿನಿ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವ ಮಹಿಳೆ ಈ ಹಿಂದೆ ನಮ್ಮ ರಾಜ್ಯ ಸರ್ಕಾರದ ಕಡೆಯಿಂದ ಅಥವಾ ಕೇಂದ್ರ ಸರ್ಕಾರದ ಕಡೆಯಿಂದ ಯಾವುದೇ ರೀತಿ ಸಾಲವನ್ನು ಪಡೆದಿರಬಾರದು. ಒಂದು ವೇಳೆ ಪಡೆದಿದ್ದರೂ ಅದನ್ನು ಪೂರ್ತಿಯಾಗಿ ತೀರಿಸಬೇಕು.
ಮತ್ತು ಈ ಉದ್ಯೋಗಿನಿ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವ ಮಹಿಳೆಯು ತನಗೆ ಇಷ್ಟವಿರುವ ಸ್ವಂತ ಉದ್ಯೋಗವನ್ನು ಮಾಡುತ್ತಿರಬೇಕು ಅಥವಾ ಸ್ವಂತ ಉದ್ಯೋಗವನ್ನು ಮಾಡಲು ಮಾತ್ರ ಈ ಯೋಜನೆಯಿಂದ ಸಾಲವನ್ನು ನೀಡಲಾಗುತ್ತದೆ. ಮರೆತು ಯಾವುದೇ ಸುಳ್ಳು ದಾಖಲೆಗಳನ್ನು ನೀಡಿ ಈ ಯೋಜನೆಯಿಂದ ಸಾಲವನ್ನು ಪಡೆಯಲು ಸಾಧ್ಯವಿಲ್ಲ.
ಬಂಧುಗಳೇ ಮೇಲೆ ತಿಳಿಸುವ ಹಾಗೆ ನೀವು ಕೂಡ ಈ ಉದ್ಯೋಗಿನಿ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸಿದರೆ ಮೇಲೆ ನೀಡಿರುವ ಅರ್ಹತೆಗಳು ನಿಮಗೆ ಇದ್ದರೆ ನೀವು ಮೇಲೆ ನೀಡಿರುವ ದಾಖಲೆಗಳನ್ನು ತೆಗೆದುಕೊಂಡು ತಕ್ಷಣವೇ ತಡ ಮಾಡದೆ ನಿಮ್ಮ ಹತ್ತಿರದ ಸೈಬರ್ ಸೆಂಟರ್ಗಳಿಗೆ ಭೇಟಿ ನೀಡಿ ಅಥವಾ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.
ಸ್ನೇಹಿತರೆ ನಿಮಗೇನಾದರೂ ಈ ಲೇಖನದಿಂದ ಉಪಯುಕ್ತ ಮಾಹಿತಿ ದೊರಕಿದ್ದರೆ ಈ ಲೇಖನವನ್ನು ನಿಮ್ಮ ಕುಟುಂಬದವರು ಮತ್ತು ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಅವರಿಗೂ ಕೂಡ ಸಹಾಯವಾಗಲಿ ಮತ್ತು ಅವರಿಗೂ ಸಹ ಮಾಹಿತಿ ತಿಳಿಯಲಿ.
ಮತ್ತು ಇದೇ ರೀತಿ ದಿನನಿತ್ಯ ಎಲ್ಲರಿಗಿಂತ ಮುಂಚಿತವಾಗಿ ಸರ್ಕಾರಿ ಯೋಜನೆಗಳ ಮಾಹಿತಿ ಪಡೆಯಲು ಮತ್ತು ಸರ್ಕಾರಿ ಕೆಲಸದ ಬಗ್ಗೆ ಮಾಹಿತಿ ಪಡೆಯಲು ನಮ್ಮ ವಾಟ್ಸಪ್ ಗ್ರೂಪ್ ಅನ್ನು ಜಾಯಿನ್ ಆಗಿ. ನಾವು ಇದೇ ರೀತಿ ದಿನನಿತ್ಯ ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿ ಹಾಗೂ ಸರ್ಕಾರಿ ಕೆಲಸದ ಬಗ್ಗೆ ಮಾಹಿತಿಯನ್ನು ಅಪ್ಲೋಡ್ ಮಾಡುತ್ತಿರುತ್ತೇವೆ.
FAQ
ಈ ಯೋಜನೆಯಿಂದ ಎಷ್ಟು ಸಲ ಸಿಗುತ್ತದೆ…?
3 ಲಕ್ಷ ರೂಪಾಯಿಗಳವರೆಗೆ.
ಎಷ್ಟು ಸಾಲ ಮನ್ನ ಮಾಡಲಾಗುತ್ತದೆ…?
1.50 ಲಕ್ಷದವರೆಗೆ ಸಾಲವನ್ನು ಮನ್ನಾ ಮಾಡಲಾಗುತ್ತದೆ.