ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಲೇಖನದ ಮೂಲಕ ತಿಳಿಸಲು ಹೊರಟಿರುವ ವಿಷಯವೇನೆಂದರೆ, ಹೊಸ ರೇಷನ್ ಕಾರ್ಡ್ ಅರ್ಜಿ ಮತ್ತು ತಿದ್ದುಪಡಿ ಯಾವ ದಿನಾಂಕದಂದು ಪ್ರಾರಂಭವಾಗುತ್ತದೆ ಎಂಬುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಲಾಗಿದೆ ಈ ಲೇಖನವನ್ನು ಕೊನೆಯವರೆಗೂ ಓದಿ…
ಹೌದು ಸ್ನೇಹಿತರೆ ರಾಜ್ಯದಲ್ಲಿ ಹಲವಾರು ಕುಟುಂಬಗಳು ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಲು ಕಾಯುತ್ತಿದ್ದಾರೆ. ಅತ್ತೆ ಅಲ್ಲದೆ ನವ ದಂಪತಿಗಳು ಕೂಡ ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಲು ಕಾಯುತ್ತಿದ್ದರೆ ಮತ್ತು ಹಲವಾರು ಕುಟುಂಬಗಳು ರೇಷನ್ ಕಾರ್ಡ್ ನಲ್ಲಿ ಆಗಿರುವ ತಪ್ಪುಗಳನ್ನು ತಿದ್ದುಪಡಿ ಮಾಡಲು ಕಾಯುತ್ತಿದ್ದಾರೆ. ಹಂತವರಿಗೆ ರಾಜ್ಯ ಆಹಾರ ಇಲಾಖೆಯು ಭರ್ಜರಿ ಗುಡ್ ನ್ಯೂಸ್ ಹೇಳಿದೆ ಎಂದು ಹೇಳಬಹುದು. ಅದೇನೆಂದರೆ ಆಹಾರ ಇಲಾಖೆಯು ತನ್ನ ಅಧಿಕೃತ ವೆಬ್ಸೈಟ್ನಲ್ಲಿ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಿದೆ.
ಯಾರು ಯಾರು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಕಾಯುತ್ತಿರುವವರು ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ನಿಮ್ಮ ಮೊಬೈಲ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು ಅಥವಾ ಹತ್ತಿರದ ಸೇವಾ ಕೇಂದ್ರಗಳಿಗೆ ತೆರಳಿ, ಕೆಳಗೆ ತಿಳಿಸಿರುವ ದಾಖಲೆಗಳನ್ನು ತೆಗೆದುಕೊಂಡು ನೀವು ಹೊಸ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸಬಹುದು. ನೀವು ಹೊಸ ರೇಷನ್ ಕಾರ್ಡಿಗೆ ಅರ್ಜಿಯನ್ನು ಸಲ್ಲಿಸಲು ಆಹಾರ ಇಲಾಖೆಯು ಕೆಲವು ಅರ್ಹತೆ ಮತ್ತು ನಿಯಮಗಳನ್ನು ತಿಳಿಸಿದೆ. ಆಹಾರ ಇಲಾಖೆ ತಿಳಿಸಿರುವ ಹಾಗೆ ನೀವು ಅರ್ಹತೆಗಳನ್ನು ಹೊಂದಿದ್ದರೆ ಮಾತ್ರ ನೀವು ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತೀರಿ. ಇಲ್ಲದಿದ್ದರೆ ನಿಮಗೆ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ.
ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳೇನು…?
ಸ್ನೇಹಿತರೆ ನೀವೇನಾದರೂ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಬಯಸಿದರೆ ಆಹಾರ ಇಲಾಖೆ ತಿಳಿಸಿರುವ ಕೆಲವು ಅರ್ಹತೆಗಳನ್ನು ನೀವು ಹೊಂದಿರಬೇಕು. ಆಹಾರ ಇಲಾಖೆಯು ತಿಳಿಸಿರುವ ಅರ್ಹತೆಗಳು ಏನು ಎಂದು ಈಗ ತಿಳಿಯೋಣ ಬನ್ನಿ…
- ನಿಮ್ಮ ವಾರ್ಷಿಕ ಆದಾಯವು 1 ಲಕ್ಷದ ಒಳಗಿರಬೇಕು.
- ನೀವು ಯಾವುದೇ ರೀತಿ ತೆರಿಗೆಯನ್ನು ಪಾವತಿಸುತ್ತಿರಬಾರದು.
- ನಿಮ್ಮ ಮನೆಯಲ್ಲಿ ಯಾವ ಸದಸ್ಯರು ಕೂಡ ಸರ್ಕಾರಿ ನೌಕರಿಯಲ್ಲಿ ಇರಬಾರದು.
- ನೀವು ಸ್ವಂತ 4 ಚಕ್ರ ವಾಹನವನ್ನು ಹೊಂದಿರಬಾರದು.
ಮೇಲೆ ತಿಳಿಸಿರುವ ಅರ್ಹತೆಗಳನ್ನು ನೀವು ಹೊಂದಿದ್ದರೆ ನೀವು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು. ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ರಾಜ್ಯ ಸರ್ಕಾರವು ಸೆಪ್ಟೆಂಬರ್ 15 ರಿಂದ ಸೆಪ್ಟೆಂಬರ್ 30ನೇ ತಾರೀಖಿನ ಒಳಗಾಗಿ ಯಾವುದಾದರೂ ಒಂದು ದಿನದಲ್ಲಿ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ನೀಡುತ್ತದೆ. ಅವಕಾಶ ನೀಡಿದ ದರ್ಶನ ನಾವು ಲೇಖನದ ಮೂಲಕ ನಿಮಗೆ ತಿಳಿಸುತ್ತೇವೆ. ಎಲ್ಲರಿಗಿಂತ ಮುಂಚಿತವಾಗಿ ನೀವು ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ.
ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಬೇಕಾಗುವ ಪ್ರಮುಖ ದಾಖಲೆಗಳು :
- ಕುಟುಂಬದ ಎಲ್ಲ ಸದಸ್ಯರ ಆಧಾರ್ ಕಾರ್ಡ್
- ಜಾತಿ ಪ್ರಮಾಣ ಪತ್ರ
- ಆದಾಯ ಪ್ರಮಾಣ ಪತ್ರ
- ಕುಟುಂಬದ ಎಲ್ಲಾ ಸದಸ್ಯರು ಇತ್ತೀಚಿನ ಫೋಟೋ
- ಜನನ ಪ್ರಮಾಣ ಪತ್ರ ( 5 ವರ್ಷದ ಒಳಗಿನ ಮಗುವಿಗೆ ಮಾತ್ರ )
ಸ್ನೇಹಿತರೆ ನೀವು ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಲು ಬಯಸಿದರೆ ಮೇಲೆ ನೀಡುವ ಪ್ರಮುಖ ದಾಖಲೆಗಳನ್ನು ತೆಗೆದುಕೊಂಡು. ಇಲಾಖೆಯ ಅಧಿಕೃತ ವೆಬ್ ಸೈಟ್ ನಲ್ಲಿ ನೀವು ನಿಮ್ಮ ಅರ್ಜಿಯನ್ನು ಸಲ್ಲಿಸಬಹುದು ಅಥವಾ ನಿಮ್ಮ ಹತ್ತಿರ ಸೇವಾ ಕೇಂದ್ರಗಳಿಗೆ ನಿಮ್ಮ ದಾಖಲೆಗಳನ್ನು ತೆಗೆದುಕೊಂಡು ಹೋಗಿ ನೀವು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ.